ಟ್ರಫಲ್
ತಿನ್ನಲು ಯೋಗ್ಯವಾದ ಒಂದು ಅಣಬೆ.  ಆಸ್ಕೊಮೈಸಿಟೀಸ್ó ಗುಂಪಿನ ಟ್ಯೂಬರೇಲೀಸ್ ಗಣಕ್ಕೆ ಸೇರಿದೆ. ಬಹಳ ಹಿಂದಿನಿಂದಲೂ ಇದೊಂದು ರಸಭಕ್ಷ್ಯವೆಂದು ಹೆಸರಲಾಗಿದೆ. ಇದರಲ್ಲಿ ಹಲವಾರು ಬಗೆಗಳುಂಟು. ಇವುಗಳಲ್ಲೆಲ್ಲ ಅತ್ಯಂತ ಪರಿಚಿತವಾಗಿರುವುದು. ಟ್ಯೂಬರ್ ಎಂಬ ಜಾತಿಯದು. ಇದು ಸಮಶೀತೋಷ್ಣವಲಯದ ಮೂಲನಿವಾಸಿ. ಇದರಲ್ಲೂ ಅನೇಕ ಪ್ರಭೇದಗಳುಂಟು. ಇವುಗಳ ಗಾತ್ರ ಬಟಾಣಿಯಿಂದ ಕಿತ್ತಳೆಹಣ್ಣಿನ ವರೆಗೆ ವ್ಯತ್ಯಾಸವಾಗುವುದು. ಫ್ರಾನ್ಸ್ ಮತ್ತು ಇಟಲಿಗಳಲ್ಲಿ ಇವನ್ನು ಹೆಚ್ಚಾಗಿ ಬಳಸುತ್ತಾರೆ. ಸಾಕಿದ ನಾಯಿ ಮತ್ತು ಹಂದಿಗಳ ಸಹಾಯದಿಂದ ಇವು ಭೂಮಿಯಲ್ಲಿ ಹುದುಗಿರುವ ಜಾಗವನ್ನು ಪತ್ತೆಹಚ್ಚಿ ಅಗೆದು ಹೊರತೆಗೆಯುತ್ತಾರೆ.

ಇವು ಪೂತಿಜನ್ಯ ಅಣಬೆಗಳು. ಇವುಗಳ ಫಲಭಾಗಗಳು ನೆಲದೊಳಗೆ ಸುಮಾರು 10-30 ಛಿm. ಆಳದಲ್ಲಿರುವುವು. ಇವು ಮಾಗಿದಾಗ ಒಂದು ವಿಧವಾದ ವಾಸನೆ ಹೊರಸೊಸುವುದು. ಇದರಿಂದಲೂ ಇವುಗಳ ನೆಲೆಯನ್ನು ಕಂಡುಕೊಳ್ಳಬಹುದು. ಬೀಜಕಗಳು ಮೊಳೆತು ಹೈಫೆ ಎಂಬ ಕವಲೊಡೆದ ಎಳೆಗಳನ್ನು ಉತ್ಪಾದಿಸುತ್ತವೆ. ಎಲೆಗಳಲ್ಲಿ ಬಹುಕೋಶಗಳಿವೆ. ಪ್ರತಿಕೋಶದಲ್ಲಿಯೂ ಒಂದೊಂದು ನ್ಯೂಕ್ಲಿಯಸ್ ಇದೆ. ಎಳೆಗಳು ಎಲ್ಲ ದಿಕ್ಕಿಗೂ ಹರಡಿ ಬೆಳೆದು ಒಂದಕ್ಕೊಂದು ಹೆಣೆದುಕೊಂಡು ವೃದ್ಧಿಯಾಗುತ್ತವೆ. ಫಲಭಾಗಗಳು ಮೂಡತೊಡಗುತ್ತವೆ. ಕ್ರಮವಾಗಿ ದಪ್ಪವಾಗುತ್ತ ಬರುತ್ತವೆ. ಬಲಿತ ಫಲಭಾಗ ದುಂಡಗಿರುತ್ತದೆ. ಇದರ ಹೊರಮೈ ನುಣುಪಾಗಿದೆ. ಇದು ಸುಮಾರು 8 ಛಿm. ವ್ಯಾಸ ದಪ್ಪ ಇದೆ. ಫಲಭಾಗದಲ್ಲಿ ಎರಡು ಪದರಗಳುಂಟು. ಒಳ ಪದರದಲ್ಲಿ ಬೀಜಕಗಳು ಉತ್ಪತ್ತಿಯಾಗುವುವು.

ಟ್ಯೂಬರ್ ಮೆಲನೋಸ್ಪೋರಂ ಎಂಬ ಪ್ರಭೇದ ಅತ್ಯಂತ ಜನಪ್ರಿಯವಾದ್ದು.
ಆ(ಎಂ.ಸಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ